#

ಕನ್ನಡ ವಿಭಾಗ (Department of Kannada):

ಪರಿಚಯ (Introduction):

ಬೀದರ್ ಜಿಲ್ಲೆಯ ಬಸವಕಲ್ಯಾಣವು ಇತಿಹಾಸ ಪ್ರಸಿದ್ಧ ನಗರವಾಗಿದೆ. ಕಲ್ಯಾಣದ ಚಾಲುಕ್ಯ ದೊರೆ ಬಿಜ್ಜಳ ಮಹಾರಾಜನು 12ನೇ ಶತಮಾನದಲ್ಲಿ ರಾಜ್ಯವಾಳಿದ ನಗರವಾಗಿದೆ. ಬಿಜ್ಜಳನ ಪ್ರಧಾನಮಂತ್ರಿ ಬಸವಣ್ಣನವರ ಕರ್ಮಭೂಮಿ ಈ ನಗರ. ಮಹಾ ಮಾನವತಾವಾದಿ, ಭಕ್ತಿ ಭಂಡಾರಿ ಬಸವಣ್ಣನವರು ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಸಿದ್ಧರಾಮ, ಅಕ್ಕಮಹಾದೇವಿ, ಲಕ್ಕಮ್ಮ ಐದಕ್ಕಿ ಮಾರಯ್ಯ ದಂಪತಿಗಳು, ಮೋಳಿಗೆ ಮಹಾದೇವಮ್ಮ-ಮಾರಯ್ಯ ದಂಪತಿಗಳು, ಮರುಳಶಂಕರದೇವ, ಹಡಪದ ಅಪ್ಪಣ್ಣ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ ಹೀಗೆ ಅಸಂಖ್ಯಾತ ಭಕ್ತರು ಮತ್ತು ಕಾಯಕ ಜೀವಿಗಳೊಡಗೂಡಿ "ಅನುಭವ ಮಂಟಪ" ಎನ್ನುವ ವಿಶ್ವದ ಮೊಟ್ಟ ಮೊದಲ "ಧಾರ್ಮಿಕ-ಸಂಸತ್ತ"ನ್ನು ಸ್ಥಾಪಿಸಿ ಅದರ ಮುಖೇನ ಅನುಭವ ಚಿಂತನ ಮಂಥನ ನಡೆಸಿದರು. ಹೀಗೆ ನಡೆಸಿದ ಅನುಭವದ ಮಂಥನದಿಂದ ಹುಟ್ಟಿಕೊಂಡಿದ್ದೇ "ವಚನಗಳು" ಎನ್ನುವ ಅಚ್ಚ ಕನ್ನಡದ ಜನರಾಡುವ ಭಾಷೆಯ ಸಾಹಿತ್ಯ. ಈ ಕನ್ನಡ ಸಾಹಿತ್ಯವನ್ನು ಅಧ್ಯಾತ್ಮಿಕ ಸಾಹಿತ್ಯವನ್ನಾಗಿ ಶರಣರು ಬೆಳೆಸಿದರು. ವಚನಗಳ ಸಾಹಿತ್ಯ ಎಷ್ಟು ಶ್ರೀಮಂತವಾಗಿದೆಯೆಂದರೆ 12ನೇ ಶತಮಾನದಿಂದ 21ನೇ ಶತಮಾನದ ಪ್ರಾರಂಭದವರೆಗೂ ತನ್ನ ಶಕ್ತಿ ಸಾಮರ್ಥ್ಯವನ್ನು ಗಟ್ಟಿಗೊಳಿಸಿಕೊಂಡೇ ಬಂದಿದೆ. ಅದುದರಿಂದಲೇ ಇದು ಸಾರ್ವಕಾಲಿಕ ಸಾಹಿತ್ಯ.

1967ರಲ್ಲಿ ಮಹಾವಿದ್ಯಾಲಯದೊಡನೆ ಕನ್ನಡ ವಿಭಾಗವೂ ಪ್ರಾರಂಭವಾಯಿತು. ಪ್ರಾರಂಭದಲ್ಲಿ ಕನ್ನಡ ವಿಭಾಗದಲ್ಲಿ ಪ್ರೊ. ಮಾಣಿಕರಾವ್ ಧನಶ್ರೀ ಮತ್ತು ಪ್ರೊ. ರಾಂಪೂರೆ ಎನ್ನುವವರು ಉಪನ್ಯಾಸಕರಾಗಿ ನೇಮಕಗೊಂಡರು. ನಂತರ ಪ್ರೊ. ದುರ್ಗಾದಾಸ ಎನ್ನುವವರು ನೇಮಕಗೊಂಡು ಕೆಲಕಾಲ ಸೇವೆಸಲ್ಲಿಸಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಅವರ ತರುವಾಯ ಪ್ರೊ. ಕಲ್ಯಾಣರಾವ್ ಪಾಟೀಲ್, ಪ್ರೊ. ನೀಲಾಂಬಿಕಾ ಸೇರಿಕಾರ, ಪ್ರೊ. ಚಿತ್ಕಳಾ ಮಠಪತಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಪ್ರೊ. ವಿಠೋಬಾ ಡೋಣ್ಣೇಗೌಡರು ಸ್ಥಾಯಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವರು.

ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಕ್ಷೇಮಲಿಂಗ ಬಿರಾದಾರ ದಿನಾಂಕ 31-05-2020 ರಂದು ವಯೋ ನಿವೃತ್ತಿರಾದ ನಂತರ ಪ್ರೊ. ವಿಠೋಬಾ ಡೋಣ್ಣೇಗೌಡರು ಎಂ.ಎ., ಎಂ.ಫಿಲ್ ಮತ್ತು ಎನ್.ಇ.ಟಿ ಪದವಿ ಧರರಾಗಿದ್ದು 12.05.2005 ರಲ್ಲಿ ಸೇವೆಗೆ ಸೇರಿಕೊಂಡಿದ್ದು, ಪ್ರಸ್ತುತ ಕನ್ನಡದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭೀಮಾಶಂಕರ ಪೂಜಾರಿ ಮತ್ತು ಪೂಜಾ ನಾಗರಾಳೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿದ್ಯಾರ್ಥಿಗಳ ಸಂಖ್ಯಾ ಮತ್ತು ಫಲಿತಾಂಶ (Students Enrollment & Result):

ಬಿ.ಎಸ್ಸಿ ವಿದ್ಯಾರ್ಥಿಗಳ ಸಂಖ್ಯಾ ಮತ್ತು ಫಲಿತಂಶ (B.Sc.):


ಕರ.ಸಂ ವರ್ಷ (Year) ಪ್ರಥಮ ವರ್ಷ (I Year) ದ್ವೀತಿಯ ವರ್ಷ (II Year) ಒಟ್ಟು (Total) ಫಲಿತಂಷ (Result)
01 2023-24 60 78 138 88%
02 2024-25 94 46 140 92%
03 2025-26 67 80 147 -


ಬಿ.ಕಂ ವಿದ್ಯಾರ್ಥಿಗಳ ಸಂಖ್ಯಾ ಮತ್ತು ಫಲಿತಂಶ (B.Com.):


ಕರ.ಸಂ ವರ್ಷ (Year) ಪ್ರಥಮ ವರ್ಷ (I Year) ದ್ವೀತಿಯ ವರ್ಷ (II Year) ಒಟ್ಟು (Total) ಫಲಿತಂಷ (Result)
01 2023-24 69 39 108 90%
02 2024-25 72 58 130 92%
03 2025-26 53 72 125 -


ಬಿ.ಸಿ.ಎ ವಿದ್ಯಾರ್ಥಿಗಳ ಸಂಖ್ಯಾ ಮತ್ತು ಫಲಿತಂಶ (BCA):


ಕರ.ಸಂ ವರ್ಷ (Year) ಪ್ರಥಮ ವರ್ಷ (I Year) ದ್ವೀತಿಯ ವರ್ಷ (II Year) ಒಟ್ಟು (Total) ಫಲಿತಂಷ (Result)
01 2023-24 34 ---- 34 86%
02 2024-25 58 34 92 88%
03 2025-26 47 58 105 -


ಬಿ.ಎ ವಿದ್ಯಾರ್ಥಿಗಳ ಸಂಖ್ಯಾ ಮತ್ತು ಫಲಿತಂಶ (B.A.):


ಕರ.ಸಂ ವರ್ಷ (Year) ವಿಷಯ (Subject) ಪ್ರಥಮ ವರ್ಷ ದ್ವೀತಿಯ ವರ್ಷ ತ್ರತೀಯ ವರ್ಷ ಒಟ್ಟು (Total) ಫಲಿತಂಷ (Result)
01 2023-24 ಐಚ್ಛಿಕ ಕನ್ನಡ (Optional) 38 52 12 102 90%
ಸಾಮಾನ್ಯ ಕನ್ನಡ (General) 113 98 --- 211 94%
02 2024-25 ಐಚ್ಛಿಕ ಕನ್ನಡ (Optional) 87 38 52 177 92%
ಸಾಮಾನ್ಯ ಕನ್ನಡ (General) 105 92 --- 197 90%
03 2025-26 ಐಚ್ಛಿಕ ಕನ್ನಡ (Optional) 32 66 38 136 -
ಸಾಮಾನ್ಯ ಕನ್ನಡ (General) 62 105 -- 167 -


ಅಧ್ಯಾಪಕರು (Faculty):

ಪ್ರೊ. ವಿಠೋಬಾ ಡೋಣ್ಣೇಗೌಡರು
HOD / ಸಹಾಯಕ ಪ್ರಾಧ್ಯಾಪಕರು
View Profile
ಭೀಮಾಶಂಕರ ಪೂಜಾರಿ
ಅತಿಥಿ ಉಪನ್ಯಾಸಕ
View Profile
ಪೂಜಾ ನಾಗರಾಳೆ
ಅತಿಥಿ ಉಪನ್ಯಾಸಕಿ
View Profile


ಕರ.ಸಂ ಭೋಧಕ ಸಿಬ್ಬಂದಿ (Name) ವಿದ್ಯಾರ್ಹತೆ (Qualification) ಹುದ್ದೆ (Designation)
1 ಪ್ರೊ. ವಿಠೋಬಾ ಡೋಣ್ಣೇಗೌಡರು ಎಂ.ಎ., ಎಂ.ಫಿಲ್., ಎನ್.ಇ.ಟಿ ವಿಭಾಗದ ಮುಖ್ಯಸ್ಥರು / ಸಹಾಯಕ ಪ್ರಾಧ್ಯಾಪಕರು
2 ಭೀಮಾಶಂಕರ ಪೂಜಾರಿ ಎಂ.ಎ., ಬಿ.ಇಡ್. ಟಿ.ಇ.ಟಿ ಉಪನ್ಯಾಸಕ
3 ಪೂಜಾ ನಾಗರಾಳೆ ಎಂ.ಎ., ಎನ್.ಇ.ಟಿ. ಉಪನ್ಯಾಸಕಿ